Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕೊಲೆಯೊಂದರ ಹಿಂದೆ ವೈದ್ಯಕೀಯ ತಿರುವುಗಳು - 3.5/5 ****
Posted date: 18 Sat, Feb 2023 � 01:12:07 PM
ನು
 
ಚಿತ್ರ : ಖೆಯೋಸ್
ನಿರ್ದೇಶನ :ಡಾ.ಜಿ.ವೆಂಕಟೇಶ್ ಪ್ರಸಾದ್ 
ನಿರ್ಮಾಪಕ : ಪಾರುಲ್ ಅಗರವಾಲ್, ಹೇಮಚಂದ್ರ ರೆಡ್ಡಿ
ಸಂಗೀತ : ವಿಜಯ್ ಹರಿತ್ಸ
ಛಾಯಾಗ್ರಹಣ : ಸಂದೀಪ್ ವಲ್ಲೂರಿ 
ತಾರಾಗಣ : ಅಕ್ಷಿತ್ ಶಶಿಕುಮಾರ,  ಅದಿತಿ,  ಶಶಿಕುಮಾರ್, ಶಿವಾನಂದ್, ಚಂದನ್ ಹಾಗೂ ಇತರರು...
  
ಒಂದು ಕೊಲೆ ನಡೆದಾಗ ಅದರ ಹಿನ್ನೆಲೆ ಹುಡುಕುತ್ತ ಹೋದಂತೆ ಅದರ ಹಿಂದಿರುವ ಜಾಲವೇ ಅನಾವರಣವಾಗುತ್ತದೆ. ಆ ಕೊಲೆಯ ಹಿನ್ನೆಲೆ  ತಡಕಾಡಿದಾಗ ಹೊರಬರುವ ಸತ್ಯಗಳು ಆಶ್ಚರ್ಯಕರ ವಾಗಿರುತ್ತವೆ.  ಆದರೆ ವೈದ್ಯಕೀಯ ಕ್ಷೇತ್ರದಲ್ಲಿ ಯಾರಿಗೂ ತಿಳಿಯದ ಹಾಗೆ ವ್ಯಕ್ತಿಯ ಕೊಲೆಮಾಡಲು ಬಳಸುವ ತಂತ್ರಗಳು, ಆ ಸುಳಿಯಲ್ಲಿ ಸಿಲುಕಿಕೊಳ್ಳುವ ವ್ಯಕ್ತಿಗಳು, ಆ ಸಮಸ್ಯೆಗೆ ಕಾರಣಗಳು, ಅದರಿಂದ ಹೊರಬರಲು ಯತ್ನಿಸುವ ಪರಿ ಇವೆಲ್ಲವೂ ಒಂದಕ್ಕೊಂದು ಲಿಂಕ್ ಆಗಿರುತ್ತದೆ. ಮೆಡಿಕಲ್ ವಿದ್ಯಾರ್ಥಿಗಳಲ್ಲಿನ  ಚಡಪಡಿಕೆಯನ್ನು ಖೆಯೊಸ್ ಚಿತ್ರದ ಮೂಲಕ ನಿರ್ದೇಶಕ ವೆಂಕಟೇಶ್ ಪ್ರಸಾದ್ ಅವರು ಹೇಳಲು ಪ್ರಯತ್ನಿಸದ್ದಾರೆ. 
 
ಕೊಲೆಯಾಗಿರುವುದನ್ನು ಕಂಡ  ಮೆಡಿಕಲ್ ಫಾರ್ಮಸಿ ಹುಡುಗನೊಬ್ಬ ಭಯಭೀತನಾಗಿ ಏನು ಮಾಡುವುದೆಂದು ತಿಳಿಯದೆ, ಮನೆಯ ಮೇಲಿದ್ದ ಮೆಡಿಕಲ್ ವಿದ್ಯಾರ್ಥಿ ಆದಿತ್ಯ(ಅಕ್ಷಿತ್ ಶಶಿಕುಮಾರ್) ಬಳಿ ಹೇಳಿಕೊಳ್ಳುತ್ತಾನೆ.  ನಂತರ ಆದಿತ್ಯ. ಕೊಲೆಯಾದ  ವ್ಯಕ್ತಿ ಯಾರು, ಆ ಕೊಲೆಯನ್ನು ಮಾಡಿದವರಾರು, ಕೊಲೆ ನಡೆದಿದ್ದರೂ ಹೇಗೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡು ಹೋದಾಗ ಅದರ ಹಿನ್ನೆಲೆ ಬದಲಾಗುತ್ತದೆ.  ಆದಿತ್ಯ ರೂಮಿನಲ್ಲಿದ್ದ ಗೆಳೆಯನನ್ನು ವಿಚಾರಿಸುವಾಗ ಹಿಂದಿನದಿನ ನಡೆದ ಪಾರ್ಟಿಯೇ ಆ ಕೊಲೆಗೆ  ಕಾರಣ ಎನ್ನುವುದು ಗೊತ್ತಾಗುತ್ತದೆ. ಹೀಗೆ ಆದಿತ್ಯನಿಗೆ ಸಿಗುವ ಒಂದೊಂದೇ  ಸುಳಿವುಗಳು ಪ್ರತಿಯೊಬ್ಬೊಬ್ಬರನ್ನು ಅಪರಾದಿಯಂತೆ ನೋಡುವಂತೆ ಮಾಡುತ್ತವೆ. ಗೆಳೆಯ, ಗೆಳತಿಯರೇ ಇಲ್ಲಿ ಅಪರಾಗಳಾಗಿ ಕಾಣುತ್ತಾರೆ. ಆ ಕೊಲೆಯಹಿಂದೆ  ಮೆಡಿಕಲ್ ವಿದ್ಯಾರ್ಥಿಯ ಕೈವಾಡವಿದೆ ಎಂದು ತಿಳಿಯುವ ಹೊತ್ತಿಗೆ  ಪ್ರಕರಣ ಮತ್ತೊಂದು ತಿರುವು ಪಡೆದುಕೊಳ್ಳುತ್ತದೆ. ಹೀಗೆ ಹಂತ ಹಂತವಾಗಿ  ಕುತೂಹಲ ಕೆರಳಿಸುತ್ತ ಸಾಗುವ ಕಥೆಯಲ್ಲಿ ನಿಜವಾದ ಅಪರಾಧಿ ಯಾರು.. ಕೊಲೆಗೆ ನಿಜವಾದ  ಕಾರಣ ಏನು... ಈ ಎಲ್ಲ ವಿಚಾರಗಳನ್ನು  ವೈದ್ಯಕೀಯ ವಿಸ್ಮಯಗಳ ಹಿನ್ನಲೆಯಲ್ಲಿ ಹೇಳುವ ಪ್ರಯತ್ನವನ್ನು ಮೂಲತಃ ಡಾಕ್ಟರ್ ಆದ ನಿರ್ದೇಶಕ ಡಾ. ಜಿ.ವಿ.ಪ್ರಸಾದ್ ಅವರು ಮಾಡಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲಿ ಮೆಡಿಕಲ್ ವಿದ್ಯಾರ್ಥಿಗಳಲ್ಲಿನ  ಆಲೋಚನೆಗಳು, ಅವರ ಪರದಾಟ, ಸಮಸ್ಯೆಗೆ ಹೇಗೆ ದಾರಿ ಹುಡುಕುವುದು, ಎಲ್ಲವನ್ನೂ ಸೂಕ್ಷ್ಮವಾಗಿ, ಅಷ್ಟೇ ಕುತೂಹಲಕಾರಿಯಾಗಿ  ತೆರೆದಿಟ್ಟಿರುವ ಶೈಲಿ ಇಂಟರೆಸ್ಟಿಂಗ್ ಆಗಿದೆ. ವಿಜಯ್ ಹರಿತ್ಸ ಅವರ ಹಿನ್ನೆಲೆಸಂಗೀತ ಗಮನ ಸೆಳೆಯುತ್ತದೆ. ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣ ಕಣ್ಣಿಗೆ ತಂಪು ನೀಡಯತ್ತದೆ. 
 
ನಾಯಕ ಅಕ್ಷಿತ್ ಶಶಿಕುಮಾರ್ ತಮಗೆ ಒಪ್ಪಿಸಿದ  ಪಾತ್ರಕ್ಕೆ ನ್ಯಾಯ ಒದಗಿಸಿದ್ದು, ಆಕ್ಷನ್ ಸೀನ್‌ಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ತಂದೆ ಶಶಿಕುಮಾರ್ ಹಾಗೂ  ಮಗ ಅಕ್ಷಿತ್ ಎದುರಾಳಿಗಳ ಜೊತೆ ನಡೆಸುವ ಕಾದಾಟ ಗಮನ ಸೆಳೆಯುತ್ತದೆ. ನಾಯಕಿ ಅದಿತಿ ಪ್ರಭುದೇವ ಚಿತ್ರದ ಪ್ರಮುಖ ಕೇಂದ್ರವಾಗಿದ್ದು, ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಮರ್ಡರ್ ಮಿಸ್ಟರಿ  ಚಿತ್ರಗಳನ್ನು ಇಷ್ಟಪಡುವವರಿಗೆ  ಖೆಯೊಸ್ ಚಿತ್ರ  ಹೆಚ್ಚು ಇಷ್ಟವಾಗುತ್ತದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕೊಲೆಯೊಂದರ ಹಿಂದೆ ವೈದ್ಯಕೀಯ ತಿರುವುಗಳು - 3.5/5 **** - Chitratara.com
Copyright 2009 chitratara.com Reproduction is forbidden unless authorized. All rights reserved.